ಡಾ. ಪ್ರಮೀಳಾ ಎಸ್ ಪಾಟೀಲ್ ಬಿಬ್ಬಳ್ಳಿ.
1998 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ಸೇಡಂ ತಾಲೂಕಿನ ಯಡಗಾ ಗ್ರಾಮದ ಶ್ರೀ ಮಲ್ಕಪ್ಪ ಹಳಖೇಡ ಸರಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಕಲೆ ಸಾಹಿತ್ಯ ನೃತ್ಯದ ಅಭಿರುಚಿ ಹೊಂದಿದ ಇವರು ಸಾಹಿತ್ಯ ರಚನೆಯಲ್ಲಿ ತೊಡಗಿ
೨೦೨೪ ರಲ್ಲಿ ಕೆಲ ಪುಸ್ತಕಗಳು ಪ್ರಕಟಿಸಿದ್ದಾರೆ.
ಅವುಗಳೆಂದರೆ: ಅರಳಿದ ಮೊಗ್ಗು,, ನನ್ನ ಶಾಲಾ ಮಕ್ಕಳೇ (ಕವನ ಸಂಕಲನಗಳು) ಚಿಣ್ಣರ ಚಿಲಿಪಿಲಿ (ಸಂಪಾದನೆ)
ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರು ಬರೆದ ಕವನ, ಲೇಖನ ಮೊದಲಾದ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ, ಸದ್ಭಾವನ ಪ್ರಶಸ್ತಿ, ಗಡಿನಾಡ ಪ್ರಶಸ್ತಿ, ರಾಜ್ಯಪಾಲರಿಂದ ಉತ್ತಮ ಗೈಡ್ ಪ್ರಶಸ್ತಿ, ಬಸವ ಪ್ರಶಸ್ತಿ.ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.